ಆತ್ಮೀಯರೇ,
ನನ್ನ ಮೊದಲ ನಾಟಕ ಕೃತಿ ರಂಗರೂಪವಾಗಿ ಈಗಾಗಲೇ ಹುಬ್ಬಳ್ಳಿಯಲ್ಲಿ ಎರಡು ಯಶಸ್ವಿ ಪ್ರದರ್ಶನ ಕಂಡು ಮೂರನೇ ಪ್ರದರ್ಶನದತ್ತ ದಾಪುಗಾಲುಕ್ಕುತ್ತಿದೆ. ನಾಟಕ ರೂಪಿಸಲು, ಆಯೋಜಿಸಲು ಪಟ್ಟ ಶ್ರಮ ಸಾರ್ಥಕತೆಯ ಭಾವ ಮೂಡಿಸಿದೆ. ಬೆಂಗ್ಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಹೀಗೆ ಇನ್ನಿತರ ಜಿಲ್ಲೆಗಳಲ್ಲಿ ನಾಟಕ ಪ್ರದರ್ಶಿಸಲು ಕೋರಿದ್ದಾರೆ. ನಾಟಕಕ್ಕೆ ಬಂದ ಪ್ರತಿಕ್ರಿಯೆ, ಸ್ಪಂದನೆ, ಅಭಿಪ್ರಾಯ ಕಂಡು ಸ್ವತಃ ನಾನೇ ಬೆರಗಾಗಿದ್ದೇನೆ. ಒಬ್ಬ ಬರಹಗಾರನಾಗಿ ತಮ್ಮೆಲ್ಲರ ಪ್ರೋತ್ಸಾಹ ಮತ್ತು ಪ್ರೀತಿಯನ್ನು ನಾನೆಂದೂ ಮರೆಯಲಾರೆ…..
ಬಿಡುವು ಮಾಡಿಕೊಂಡು ಬನ್ನಿ
-Somu Reddy (Writer Of Talash)